Ad Code

Responsive Advertisement

ಕಾಫಿ ಮಂಡಳಿಯಲ್ಲಿ ಜಿಲ್ಲೆ, ರಾಜ್ಯಕ್ಕೆ ದೊರೆಯದ ಸೂಕ್ತ ಪ್ರಾತಿನಿಧಿತ್ವ


ಕಾಫಿ ಮಂಡಳಿಯಲ್ಲಿ ಜಿಲ್ಲೆ, ರಾಜ್ಯಕ್ಕೆ ದೊರೆಯದ ಸೂಕ್ತ ಪ್ರಾತಿನಿಧಿತ್ವ

ಕೇಂದ್ರ ವಾಣಿಜ್ಯ ಸಚಿವಾಲಯ ಕಾಫಿ ಮಂಡಳಿಯ ನೂತನ ಸದಸ್ಯರುಗಳನ್ನು ನೇಮಿಸಿದ್ದು ಇದರಲ್ಲಿ ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧಿತ್ವ ನೀಡಿಲ್ಲ ಎಂದು ಬೆಳೆಗಾರ ಸಂಘಟನೆಗಳು ದೂರಿಕೊಂಡಿವೆ.

ಕಾಫಿ ಬೆಳೆಗಾರರ ಮತ್ತು ಉದ್ಯಮದ ಏಳಿಗೆಗಾಗಿ ದುಡಿಯುತ್ತಿರುವ ಕಾಪಿ ಮಂಡಳಿಯಲ್ಲಿ ಅದ್ಯಕ್ಷರೂ ಸೇರಿದಂತೆ 33 ಸದಸ್ಯರುಗಳಿದ್ದು ಕೇಂದ್ರ ಸರ್ಕಾರ ಬುಧವಾರ ಒಟ್ಟು 30 ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಎಂದಿನಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಓರ್ವ ಲೋಕಸಭಾ ಸದಸ್ಯರಿಗೆ ಸ್ಥಾನ ನೀಡುವ ಜತೆಗೇ ಈ ಬಾರಿ ಆಂಧ್ರ ಪ್ರದೆಶದ ಓರ್ವ ಸದಸ್ಯರಿಗೂ ಸ್ಥಾನ ನೀಡಲಾಗಿದೆ.

ಮಂಡಳಿಯ ಸದಸ್ಯತ್ವದಲ್ಲಿ ಐಏಎಸ್ ಅಧಿಕಾರಿಗಳನ್ನು ನೇಮಿಸಲಾಗುತಿದ್ದು ಇದರಲ್ಲಿ ಮೊದಲು ಕರ್ನಾಟಕ , ಕೇರಳ ಮತ್ತು ತಮಿಳುನಾಡಿನ ತಲಾ ಓರ್ವ ಐಏಎಸ್ ಅಧಿಕಾರಿಗಳಿಗೆ ಸ್ಥಾನ ನೀಡಲಾಗುತಿದ್ದರೆ ಈ ಬಾರಿ ಆಂಧ್ರ ಪ್ರದೇಶದ ಓರ್ವ ಐಏಎಸ್ ಅಧಿಕಾರಿಗೂ ಸ್ಥಾನ ನೀಡಲಾಗಿದೆ.

ಈಶಾನ್ಯ ರಾಜ್ಯಗಳಿಂದ ಓರ್ವ ಐಏಎಸ್ ಅಧಿಕಾರಿಗೆ ಸ್ಥಾನ ನೀಡುತಿದ್ದು ಈ ಬಾರಿ ಇಬ್ಬರು ಅಧಿಕಾರಿಗಳಿಗೆ ಸದಸ್ಯತ್ವ ನೀಡಲಾಗಿದೆ.

ಇನ್ಸಟಂಟ್ ಕಾಫಿ ತಯಾರಕ ಪ್ರಾತಿನಿಧಿತ್ವ ಮೊದಲಿಗೆ ಕರ್ನಾಟಕಕ್ಕೆ ಸಿಗುತ್ತಿತ್ತು. ಅದು ಈ ಬಾರಿ ಆಂದ್ರ ಪ್ರದೇಶದ ಕಾಪಿ ತಯಾರಕರೊಬ್ಬರಿಗೆ ಸಿಕ್ಕಿದೆ. ಗ್ರಾಹಕ ವರ್ಗದಿಂದ ಇಬ್ಬರು ಸದಸ್ಯರಿಗೆ ಅವಕಾಶವಿದ್ದು ಈ ಬಾರಿ ಮದ್ಯ ಪ್ರದೇಶ ಮತ್ತು ಮಹಾರಾಷ್ಟ್ರ ದಿಂದ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಕಾರ್ಮಿಕ ವಲಯದಿಂದ ಈ ಹಿಂದೆ ಮೂವರು ಸದಸ್ಯರನ್ನು ನೇಮಿಸಲಾಗುತಿದ್ದು ಈ ಬಾರಿ ಇಬ್ಬರಿಗೆ ನೀಡಲಾಗಿದೆ.

ದೊಡ್ಡ ಕಾಫಿ ಬೆಳೆಗಾರ ವರ್ಗದಿಂದ ಮೂವರಿಗೆ ಸದಸ್ಯತ್ವ ನೀಡಲಾಗಿದ್ದು ಈ ಬಾರಿ ತಮಿಳುನಾಡಿನಿಂದ ಇಬ್ಬರು ಮತ್ತು ಚಿಕ್ಕಮಗಳೂರಿನಿಂದ ಒಬ್ಬರಿಗೆ ನೀಡಲಾಗಿದೆ. ಹಿಂದೆ ರಾಜ್ಯದಿಂದ ಇಬ್ಬರು ದೊಡ್ಡ ಬೆಳೆಗಾರರಿಗೆ ಅವಕಾಶ ನೀಡಲಾಗಿತ್ತು. ಸಣ್ಣ ಕಾಫಿ ಬೆಳೆಗಾರ ವಲಯದಿಂದ ಒಟ್ಟು 7 ಸದಸ್ಯರುಗಳಿಗೆ ಅವಕಾಶ ಇದ್ದು ಇದರಲ್ಲಿ ಈ ಬಾರಿ ಆಂದ್ರ ಪ್ರದೇಶದ ಇಬ್ಬರು ಸದಸ್ಯರುಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಆಂದ್ರ ಪ್ರದೇಶಕ್ಕೆ ಅವಕಾಶ ನೀಡಿರಲಿಲ್ಲ.

ಕಾಫಿ ವ್ಯಾಪಾರಿ ವಲಯದಿಂದ ಚಿಕ್ಕಮಗಳೂರು, ತಮಿಳುನಾಡು ಮತ್ತು ಆಂದ್ರ ಪ್ರದೇಶದ ತಲಾ ಓರ್ವರಿಗೆ ಸ್ಥಾನ ನೀಡಲಾಗಿದೆ. ಈ ಹಿಂದೆ ಈ ಮೂರೂ ಸ್ಥಾನಗಳನ್ನು ಕರ್ನಾಟಕದಿಂದಲೇ ಆಯ್ಕೆ ಮಾಡಲಾಗುತಿತ್ತು. ಕಾಫಿ ಸಂಸ್ಕರಣಾ ವಿಭಾಗದಿಂದ ಈರ್ವರಿಗೆ ಅವಕಾಶ ಇದ್ದು ಚಿಕ್ಕಮಗಳೂರಿನಿಂದಲೇ ಈರ್ವರು ಸದಸ್ಯರಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಕೊಡಗಿನಿಂದಲೇ ಈರ್ವರಿಗೆ ಅವಕಾಶ ನೀಡಲಾಗಿತ್ತು.

ಕಾಪಿ ಮಂಡಳಿಯ ನೂತನ ಸದಸ್ಯತ್ವದ ಕುರಿತು ಪ್ರತಿಕ್ರಿಯಿಸಿದ ಮಾಜಿ ಉಪಾದ್ಯಕ್ಷ ಡಾ ಸಣ್ಣುವಂಡ ಕಾವೇರಪ್ಪ ಅವರು ಮಂಡಳಿಯಲ್ಲಿ ಜಿಲ್ಲೆ ಮತ್ತು ರಾಜ್ಯಕ್ಕೆ ಪ್ರಾತಿನಿಧಿತ್ವ ಕಡಿಮೆ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದೇಶದ ಕಾಪಿ ಉತ್ಪಾದನೆಯಲ್ಲಿ ಶೇಕಡಾ 70 ರಷ್ಟನ್ನು ಹೊಂದಿರುವ ರಾಜ್ಯ ಮತ್ತು ಶೇಕಡಾ 30 ಕ್ಕೂ ಅಧಿಕ ಪಾಲನ್ನು ಹೊಂದಿರುವ ಕೊಡಗು ಜಿಲ್ಲೆಗೆ ನೀಡಿರುವ ಪ್ರಾತಿನಿದ್ಯ ಬಿಜೆಪಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಕಡಿಮೆ ಆಗಿದೆ ಎಂದು ಅವರು ಹೇಳಿದರು.

ಈ ಹಿಂದೆ 2008 ರ ಅವಧಿಯಲ್ಲಿ ತಾವು ಮಂಡಳಿಯ ಸದಸ್ಯರಾಗಿದ್ದಾಗ ಜಿಲ್ಲೆಯಿಂದ ತಾರಾ ಐಯ್ಯಮ್ಮ, ವೀರಾಜಪೇಟೆಯ ಅಪ್ಪಚ್ಚು, ವಿಮಲಾ ಗೋಪಾಲ್ ಮತ್ತು ಕುಶಾಲನಗರದ ಕಾಪಿ ಸಂಸ್ಲರಣಾದಾರರೊಬ್ಬರು ಸೇರಿದಂತೆ ಜಿಲ್ಲೆಯಿಂದ ಐವರಿಗೆ ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದರು.

✍️....ಕೋವರ್‌ ಕೊಲ್ಲಿ ಇಂದ್ರೇಶ್‌ 

       ( ಪತ್ರಕರ್ತರು )

( ಕೋವರ್‌ ಕೊಲ್ಲಿ ಇಂದ್ರೇಶ್‌ )