Ad Code

Responsive Advertisement

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಪಡುವ ಸಣ್ಣ ಕಾಫಿ ಬೆಳೆಗಾರರಿಂದ ಸಹಾಯಧನಕ್ಕೆ ಅರ್ಜಿ


ಮಡಿಕೇರಿ: ಕಾಫಿ ಮಂಡಳಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಪಡುವ ಸಣ್ಣ ಕಾಫಿ ಬೆಳೆಗಾರರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

ಪ್ರಸ್ತುತ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಪಡುವ ಸಣ್ಣ ಕಾಫಿ ಬೆಳೆಗಾರರು 2022 ರ ಸೆಪ್ಟೆಂಬರ್, 30 ರವರೆಗೆ ಕೈಗೊಳ್ಳುವ ಕಾಫಿ ಮರುನಾಟಿ, ಹೊಸದಾಗಿ ಕೆರೆ ನಿರ್ಮಿಸಲು, ಪಲ್ಪರ್, ಕಾಫಿ ಕಣ ಹಾಗೂ ಗೋದಾಮು ನಿರ್ಮಿಸಲು 2 ಹೆಕ್ಟೇರ್‍ವರೆಗೆ ಕಾಫಿ ತೋಟ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ        ಶೇ.90 ರಷ್ಟು ಹಾಗೂ 2 ಹೆಕ್ಟೇರ್ ರಿಂದ 10 ಹೆಕ್ಟೇರ್ ವರೆಗೆ ಕಾಫಿ ತೋಟ ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬೆಳೆಗಾರರಿಗೆ ಶೇ.75 ರಷ್ಟು ಸಹಾಯಧನದ ಸೌಲಭ್ಯ ವಿಸ್ತರಿಸಲಾಗಿದೆ. 

ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಪಡುವ ಕಾಫಿ ಬೆಳೆಗಾರರು ಕಾಫಿ ಮಂಡಳಿಯಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬೆಳೆಗಾರರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.